Saturday, December 30, 2017

ಮೌಲ್ಯ ಅಮಾನ್ಯದ  ವ್ಯಾಖ್ಯಾನ ನಾವೆಲ್ಲರೂ ಕೇವಲ ಒಂದು ವರುಷದ ಹಿಂದಿನಿಂದ ಕೇಳುತ್ತಿದ್ದೇವೆ, ಬಹಳಷ್ಟು ಜನ ಮೊದಲೇ ಕೇಳಿರಬಹುದು, ಆದರೆ ಮೌಲ್ಯ ಅಮಾನ್ಯದ ಉಲೇಖ ರಾಮಾಯಣದಲ್ಲು  ಇದ್ದದು ಓದಿ ಇಡೀ ದಿನವೆಲ್ಲ ತಡಕಾಡತೊಡಗಿದೆ.
ಶ್ರೀ ರಾಮಚಂದ್ರರ ಪಟ್ಟಾಭಿಷೇಕವಾಗುವ ಮುನ್ನ ,ಪ್ರಜೆಗಳು ಬಹಳ ನೊಂದಿದ್ದರು , ಪಟ್ಟಾಭಿಷೇಕವಾದ ನಂತರ ಶ್ರೀ ರಾಮರು ಮಾಡಿದ ಎರಡನೇ ಆಜ್ಞೆಯೇ  ಮೂಲ್ಯ ಅಮಾನ್ಯ. ಹಾಗಾದರೆ ಮೊದಲ ಆಜ್ಞೆಯೇನಿರಬಹುದು ? ಇದರ ಬಗ್ಗೆ ಇಳಿದು ಕೊಳ್ಳುವುದು ಬಹಳ ಸುಲಭ, ಏಕೆಂದರೆ ಈಗಿನ ಬಲಿಷ್ಠ ರಾಷ್ಟ್ರವಾದಂತ ರಷ್ಯಾ ಅದನ್ನು ಪಾಲಿಸುತ್ತಿದೆ. ಪ್ರಜೆಗಳಿಂದ ರಾಜನೇ ಹೊರತು, ರಾಜನಿಂದ ಪ್ರಜೆಯಲ್ಲ, ಅಂದರೆ ಪ್ರಜೆಗಳ ಕೆಲಸವೇ ರಾಜ್ಯ ಅಥವಾ ರಾಷ್ಟ್ರವನ್ನು ಕಟ್ಟುವುದು, ಪ್ರಜೆ ದೇಶಕ್ಕಾಗಿ ದುಡಿಯಬೇಕು ಸ್ವಂತಕ್ಕಲ್ಲ, ಪ್ರಜೆಯ ಮನೆ ಮನೆಯಲ್ಲ , ಅದು ನೆಲೆ. ಪ್ರಜೆ ದುಡಿಯುವ ಭೂಮಿ ಪ್ರಜೆಯಾದಲ್ಲ ಅದು ರಾಷ್ಟ್ರದ ಸಂಪತ್ತು. ಹೀಗೆ ಪ್ರಜೆ ಹೇಗೆ ದುಡಿಯುವನು ಹಾಗೆ ರಾಷ್ಟ್ರ ಅಥವಾ ರಾಜ್ಯ ಅವನನ್ನು ಗುರುತಿಸಿ ಅವನಿಗೆ ಗೌರವಿಸುವುದು. ಹೀಗೆ ಹಲವಾರು ತಂತ್ರಗಾರಿಕೆ ಇಂದ ಕೊಡಿತ್ತು ಶ್ರೀರಾಮರ ಪ್ರಜಾರಾಜ್ಯದ ಮೊದಲ ಆಜ್ಞೆ.  ಎರಡನೇ ಆಜ್ಞೆಯೇ ಮೂಲ್ಯ ಅಮಾನ್ಯ. ಆಕಾಲದಲ್ಲಿ ನೋಟ್ ಇರಲ್ಲಿಲ್ಲ, ಹಾಗಾದರೆ ಡೆಮೋನಿಟೈಝಷನ್ ಹೇಗಾಗಿರಬಹುದೆಂಬ ತಿಳಿದುಕೊಳ್ಳುವ ಕುತೂಹಲ.. ಹಾಗೆ ಓದಿದ ಮೇಲೆ ಗೊತ್ತಾಯಿತು ಮುದ್ರೆ ಅಥವಾ ಹಾಲ್ಮಾರ್ಕ್ ನ ಒಳಾರ್ಥ. ಶ್ರೀ ರಾಮರು ಮಾಡಿದ ಆಜ್ಞೆಯಲ್ಲಿ , ಪ್ರಜಾವ್ಯವಸ್ಥೆ ಯನ್ನೇ ಅಲುಗಾಡಿಸುವ ಆಜ್ಞೆ ಅದಾಗಿತ್ತು. ಪ್ರಜೆಗಳು ಸಂಪಾದಿಸಿದ ವಜ್ರ ಖಚಿತ ಚಿನ್ನಾಭರಣಕ್ಕೆ ರಾಜಮುದ್ರೆಯಾಗಬೇಕು , ರಾಜಮುದ್ರೆಯಾಗದ ಆಭರಣವು ತೃಣಕ್ಕೆ ಸಮಾನ. ಈ ಕಾರಣದಿಂದ ಕಾಳಧನಿಕರ ಹೃದಯದಲ್ಲಿ ಅಡಗಿದ್ದ ಭಯದ ಶಬ್ದ ಆಜ್ಞೇಯ   ವಿರೋಧಾರ್ಥಕವಾಗಿ ಕರ್ಣ ಕಠೋರವಾಗಿ ಶ್ರೀ ರಾಮರನ್ನು ದೂಷಿಸಿತ್ತು.  ಆದ ಕಾರಣ ಶ್ರೀ ರಾಮರ ರಾಜ್ಯ ರಾಮರಾಜ್ಯವಾಗಿಬದಲಾಗಲು, ಆ ಆಜ್ಞೆ ಮಾಡಿದ ಎರಡನೇ ದಿನದಿಂದ ೭ ವರುಷ ೩ ತಿಂಗಳುಗಳು ಸಂದವು.
ಮೌಲ್ಯ  ಅಮಾನ್ಯದ ಶ್ರೀ ರಾಮರ ನೋಟದ  ಬಗ್ಗೆ ಇನ್ನು ಬಹಳಷ್ಟು ಓದುವುದಿದೆ,ಅದನ್ನರಿತು ಮುಂದೆ ಬರಿಯುತ್ತೇನೆ.

---ಸಂಕೇತ್---
ಮೊದಲ ಬಾರಿಗೆ ಪ್ರಧಾನ ಮಂತ್ರಿ ನಮ್ಮವರೆನ್ನುವ ಭಾವ ನಮ್ಮಲ್ಲಿ ಮೂಡಿದೆ. ಶ್ರೀಯುತ  ನರೇಂದ್ರ ಮೋದಿರವರು ಚಿರಾಯುವಾಗಲಿ ಎಂದು ಆ ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ.
 ಮನಷ್ಯನಿಗೆ ಊಟದ ಬದಲು ಊಟ ಗಳಿಸುವ ಒಳ್ಳೆಯ ವಿದ್ಯೆ ಯನ್ನು ನೀಡಿದರೆ ಅದು ಇನ್ನು ಹಲವರಿಗೂ ಉಪವಾಸದ ಕ್ಲಿಷ್ಟ ಸಮಸ್ಯೆಯನ್ನು ಹಾಗು ಸಮಾಜದಲಿ ವಿನಯ ಭಾವ ಮೂಡುತ್ತದೆ. ವಿದ್ಯಾದಾನವೇ ಶ್ರೇಷ್ಠವಾದ ದಾನ, ನವಿರುವರೆಗೂ ಬೇರೆಯವರಿಗೆ ಊಟ ಹಾಕಬಹುದು, ನಾವು ಹೋದಮೇಲೆ ಅವರಗತಿ ಏನು ? ಹಾಗಾಗಿ ಗಳಿಸುವ ವಿದ್ಯೆಯನ್ನು ಹೇಳಿಕೊಟ್ಟರೆ ಮುಂದೆ ಅವರು ಹಾಗು ಇತರರು ಸುಖವಾಗಿರಬಹುದು.
ಮೋದಿಜಿ, ಎರಡು ವರುಷದ ಹಿಂದೆ ಸೆಂಟ್ರಲ್ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳಿಗೆ, ವಿಜ್ಞಾನದ ಪುಸ್ತಕದ ಬೆಲೆ ೪ ಸಾವಿರದಮೇಲು ದಾಟಿತ್ತು . ಇದರ ಮೂಲ ಪುಸ್ತಕ ಪ್ರಕಾಶನದ ದಬ್ಬಾಳಿಕೆ. ಪೋಷಕರು ಆ ಪುಸ್ತಕ ಸಿಗದೇ ಒದ್ದಾಡುತ್ತಿದರು, ಇದರಿಂದ ಹೊರಗೆ ಬರಲು ಪೋಷಕರು ಮಕ್ಕಳು ಹಪಹಪಿಸುತ್ತಿದರು. ಇದ್ದನರಿತ ಪೋಷಕರು, ಹೋಗಿದ್ದು ಮೋದಿಜಿಯ ಮೊರೆಗೆ.
ಎಲ್ಲವನ್ನು ಅರಿತ ಮೋದಿಜಿ, ಮುಂದಿನ ಶೈಕ್ಷಣಿಕ ವರುಷದಲ್ಲಿ , ಪೋಷಕರು ಶಾಲೆಯ ಮುಖಾಂತರ ಮಗುವಿನ ವಯಸ್ಸು ಹಾಗು ತರಗತಿಯ ಮಾಹಿತಿಯನ್ನು ಕೊಟ್ಟರೆ, ಪುಸ್ತಕಗಳು ನೇರ ಮನೆಗೆ ಬಂದು ಸೇರುವುದು. ಇಂತಹ ಮತ್ಕಾರ್ಯವನ್ನು ಮಾಡಿಕೊಟ್ಟ ನಿಮಗೆ ನಮ್ಮಿಂದ ತುಂಬು ಹೃದಯದ ಧನ್ಯವಾದ. ಇಷ್ಟು ವರುಷಗಳ ನಂತರ ಬಹಳಷ್ಟು ಜನಕ್ಕೆ, ನಾವು ಭಾರತೀಯರು ಎಂಬ ಗರ್ವ ಬರುತ್ತಿದೆ. ನಿಮಗೆ ಆ ಭಗವಂತ ಆಯುರಾರೋಗ್ಯವನ್ನು ನೀಡಲಿ ಎಂದು ಅವನಲ್ಲಿ ಪ್ರಾರ್ಥಿಸುತ್ತೆನೆ.
ಜೈ ಹಿಂದ್, ಲೋಕಸಮಸ್ತ ಸುಖಿನೋ ಭವಂತು......
..ಸಂಕೇತ್ ಕಶ್ಯಪ್. .

Tuesday, January 10, 2012

ನ್ಯಾಯ ಅನ್ಯಾಯ


ನ್ಯಾಯ ಅನ್ಯಾಯದಿಂದಾದರೂ ಅನ್ಯಾಯವನ್ನು ಮಣಿಸುತ್ತದಾದ ಕಾರಣ, ನ್ಯಾಯ ಅನ್ಯಾಯವನ್ನು ತಿಳಿಯುವುದರಲ್ಲಿ ಅನೇಕರು ನ್ಯಾಯವನ್ನು ನಿಂದಿಸುತ್ತಾರೆ....
ಮಹಾಭಾರತವನ್ನು ಸಾಕಷ್ಟುಬಾರಿ ಒದಿದಮೇಲೆ ಬಂದತಹ ಒಂದು ಸಮೀಕ್ಷೆ ಇದಾಗಿದೆ.... ಇದರ ವಿಷ್ಲೇಶಣೆಯನ್ನು ಬರೆಯುವುದು ಹೇಗೆಂದು ಆಲೋಚನೆ ನಡೆಯುತ್ತಿದೆ......

Friday, November 25, 2011

80A ನಲ್ಲಿ ಒಂದು ದಿನ.............


80A ನಲ್ಲಿ ಒಂದು ದಿನ.............

ಬಿಸಿಲಿನ ಬೇಗೆ ಬೆಂದಕಾಳೂರಿನ ಜನಸಾಮಾನ್ಯರನ್ನು ಬೇಯಿಸುತಿತ್ತು, ಅಂದು ಫಾಲ್ಗುಣ ಮಾಸದ ಒಂದು ದಿನ. ಹೀಗೆ ಮನೆಗೆ ಸೇರಲೆಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಾಯುತ್ತಾನಿಂತಿದ್ದ ಬಹಳಷ್ಟು ಜನ ಬೇಸತ್ತು, ನಿಲ್ಲುವುದಕ್ಕೂ ತ್ರಾಣವಿಲ್ಲದೆ ಹಾತೊರೆಯುತ್ತಿರಬೇಕಾದರೆ........
--ನಮ್ಮ್ ಸರ್ಕಾರ ಸರಿಇಲ್ಲ್ರಪ, ನೋಡಿ ಇಷ್ಟ್ ಹೊತ್ತಾದ್ರು ೧ ಬಸಿಲ್ಲ ೮೦ಎ, ಇಷ್ಟೊಂದ ಬಿಸಿಲು ? ಎಷ್ಟೊಂದು ಸಖೆ ? ಮಳೆನೂಬರಲ್ಲಾ, ಎಷ್ಟೊಂದ್ ಜನ ? ನಮ್ ವಿಷ್ಣುವರ್ಧನ್ ಸಹಿತಾ ಹೋಗ್ಬಿಟ್ರು, ಮುಂದಿನಸಲ ಈ ಸರ್ಕಾರಕ್ಕೆ ಮತ ಕೊಡ್ಬಾರ್ದು, ಮತ್ತೆ ಈ ಸರ್ಕಾರ ಆಡಳಿತಕ್ಕೆ ಬರಬಾರದು... ಅನ್ನೊಶಬ್ದಗಳ ಸುರಿಮಳೆಯಾಗುತಿತ್ತು.

 ಹಾಗೆ ಒಬ್ಬರು ಇನ್ನೊಬ್ಬರನ್ನು ಸಂತೈಸುತ್ತಾ, ಒಬ್ಬರ ಮೇಲ್ ಒಬ್ಬರು ಕರುಣೆತೋರಿಸುತ್ತಾ, ತಮ್ಮ ತಮ್ಮ ದುಗುಡಗಳನ್ನು ಹಂಚಿಕೊಳುತ್ತಾ ನಿಂತಿರಬೇಕಾದರೆ,.....-- ಏನ್ಸಾರ್ ನೀವೇನು ಮಾತಾಡ್ತನೆಇಲ್ವಲ? ಒಳಗ್ ಒಳಗೇ ನೆಗಿತಿದಿರೀ( ನಗ್ಗುತಾ ಇದ್ದಿರೀ?) ? ನಿಮಿಗೇನು ಅನ್ಸಲ್ವಾ ನಮ್ಮ್ ಬಗ್ಗೆ ಅಂತ ಒಬ್ಬ ಮಹಾಶಯರಿಂದ ಪ್ರಶ್ನೆ ಕೇಳಿಬಂತು..... ಆಗಲೇ ಗೊತ್ತಾದದ್ದು, ನನಗೇ ಒಂದು ಸಮಸ್ಯೆ ಎದುರಾಗುತ್ತಿದೆ ಎಂದು..!!!

--ಏನ್ ಸಾರ್ ನಾವೆಲ್ಲಾ ಹೀಗೆ ಮಾತಾಡ್ತಿದ್ರೆ ನೀವೇನು ನೆಗಿತಿದಿರೀ? ನೀವು --ರಾಜಕೀಯದೋರ ಅಥವ ಸರ್ಕಾರೀ ಕೆಲಸದಲ್ಲಿರೋದ ಎಂಬ ಪ್ರಶ್ಣೆ ನನಗೆ ಎದುರಾಯಿತು ?  ನಾನು ನಗುತಡೆಯಲಾರದೇ, ಇಲ್ಲಾ ಸಾರ್, ನಾನು ವಿದ್ಯಾರ್ಥಿ ಅನ್ನುವಹೊತ್ತಿಗೆ ಜನ ನನ್ನೆಡೆ ಓಡಿ ನುಗ್ಗಿ ಬರುತ್ತಿದ್ದರು, ಅವರ ಮುಖದಲ್ಲಿ ಏನೋ ಗಲಿಬಿಲಿಯ ಸಂತಸದ ಛಾಯೆ ಮೂಡಿತ್ತು , ನನ್ನ ಪಕ್ಕದಲೇ ನಿಂತಿದ್ದ ನನ್ನ ಸ್ನೇಹಿತ ಕಂಗಾಲಾದದ್ದನ್ನು ನೋಡಿ ನನಗೂ ದುಗುಡವಾಗಿ ಇವರಿಂದ ತಪ್ಪಿಸಿಕೊಳೊಣವೆಂದು ತಿರುಗಿದ ಕ್ಷಣವೇ ತಿಳಿದಿದ್ದು ೮೦ಎ ಷಟ್  ಚಕ್ರ ದೂಮ್ರಷಟಕ ನಿಲ್ದಾಣದಲ್ಲಿ ಮಿಕ್ಕ ಜನರಿಗೆಲ್ಲಾ ಕಾಣಿಸಿದೆ ಎಂದು...!!!
ಹೀಗೆ ನಾವು ಬಸ್ಸ್ ಏರಿದ ಕೂಡಲೇ ನಮಗೆ ಆಸನ ಸಿಕ್ಕಿತಾದಕಾರಣ ನಮಗೆ ಇತರರನ್ನು ನೊಡುವ ಸಮಯ ಓದಗಿತು, ಹೀಗೆ ನೋಡುತ್ತಿರಬೇಕಾದರೆ, ನಿನ್ಮನೆ ಎಕ್ಕೂಟ್ ಹೋಗ ದಬ್ತೀಯಲ್ಲೊ ಸ್ವಲ್ಪ ತಡಿಯೋ, ದರಿದ್ರದೊನೆ ಸೀಟ್ ಬೇಕಾದ್ರೆ ಹೀಗೆ ತಳ್ ಬೇಕು, ನುಗ್ಗು ನುಗ್ಗು ಮುಂದೆ, ಬೇಗ್ ಹತ್ತಲೇ .....ಮಗನೇ, ಥು ಎಂತ ದರಿದ್ರ ಜನನಪ್ಪ ಸಾಯ್ತರೆ.... ಹೀಗೆ ಇನ್ನೂ ಹಲವಾರು ಬೈಗುಳಗಳ ನಡುವೆ ೮೦ಎ ಕ್ಷಣ ಮಾತ್ರದಲ್ಲಿ ತುಂಬಿತು.... ನಾವು ಅಂಗವಿಕಲರಿಗೆ ಕಾದಿರಿಸಿದ ಆಸನದ ಹಿಂದೆ ಆಸೀನರಾಗಿದ್ದೆವು. ನಮ್ಮ ಎದುರು ಸಾಲಿನಲ್ಲಿ ನನಗೆ ಪ್ರಶ್ಣೆಯನ್ನು ಕೇಳಿ, ಒಂದು ಕ್ಷಣ ದುಗುಡಕ್ಕೆ ಸಿಲುಕಿಸಿದ ವ್ಯಕ್ತಿ ಕೂತ್ತಿದ್ದರು. ಹೀಗೆ ಒಬ್ಬ ಮಹಿಳೆ ಅವರಿಗೆ, ಇದು ಲೇಡಿಸ್ ಸೀಟ್ ಅಲ್ವ ಸಾರ್ ? ಎಂದು ಕೇಳಿದ್ದೇ ತಡ...
--ಅಲ್ರಿ ಏನ್ ಅನ್ಕೊಂಡಿದಿರೀ? ಎಲ್ಲಾ ಸೀಟು ನಿಮ್ದೇನಾ? ಅಂಗವಿಕಲರೂ ಎಂದರೆ ಲೇಡಿಸ್ ಅಂತನಾ ? ಎಂದು ಗದರಿಸುವ ಧಾಟಿಯಲ್ಲಿ ಕೇಳಿದರು. ಆ ಮಹಿಳೆ ಹಿಂಜರೆದು ನಿಂತರಾದರೂ ಅವರ ಕಣ್ಣು ನಮ್ಮಮೇಲೆ ಬಿತೋ ಎನ್ನುವ ಮನೋಭಾವ ನಮ್ಮಲ್ಲಿ ಮೂಡಿತೋ ತಿಳಿಯಲಿಲ್ಲ, ನಾವು ನಮ್ಮ ಆಸನವನ್ನು ಆ ಮಹಿಳೆಗೆಂದು ಬಿಟ್ಟುಕೊಟ್ಟೆವು. ಅದನ್ನು ನೋಡಿ ಆ ಮನುಷ್ಯ….
--ಯಾಕ್ರಪ್ಪ ? ನೀವ್ ನನಿಗಾದ್ರೆ ಬಿಟಿರ್ತಿದ್ರ ಸೀಟು? ಅವ್ರಿಗ್ ಹೇಗ್ ಬಿಟ್ಕೋಟ್ರಿ? ಹೀಗ್ ಮಾಡರಿಂದಲೆ ಅವ್ರು ತಲೆಮೇಲ್ ಹತ್ಕೊಳದು ತಿಳ್ಕೊರಿ ಎಂದು ನಮಗೆ ವೇದ ಪಠನ ಮಾಡಿಸಿದರು, ಸ್ವಲ್ಪ ಹೊತ್ತು ಕರಾಳ ನಿಶಬ್ದವಾತಾವರಣ ಮೂಡಿತು. ಬಸ್ಸು ಇನ್ನೂ ನಿಲ್ದಾಣವನ್ನು ಬಿಟ್ಟಿರಲಿಲ್ಲ, ಎಲ್ಲಿಂದಲೋ ಒಂದು ಕೂಗು ಬಂತು, ಲೇ ದರಿದ್ರ ಡ್ರೈವರ್ ಹೊರ್ಡೊ ಬೇಗ ಎಂದು ಮೂಡಿಬಂತು. ತಕ್ಷಣ ಈ ವಿಚಿತ್ರ ಮನುಷ್ಯ ತನ್ನ ಗುಣಕ್ಕಣುಗುಣವಾಗಿ ಗೊಣಗಲು ಆರಂಭಿಸಿದ.....--ಅಲ್ಲಾ ಸರ್ಕಾರಕ್ಕೆ ತೆಲೆನೇ ಇಲ್ಲ, ಈ ಬಸ್ ಡ್ರೈವರ್ ಗೆಲ್ಲಾ ಯಾಕ್ ಕೆಲ್ಸಕೊಡ್ತಾರೋ ಏನೋ, ನನಿಗೇನಾದ್ರು ಅಧಿಕಾರಕೊಟ್ರೆ ಈ ಡ್ರೈವರ್ನೆಲ್ಲಾ ಹೊಗೆ ಹಾಕುಸ್ಬಿಡ್ತೀನಿ, ಹಾಗೆ ಮಹಿಳೆಯರಿಗೆ ಒಂದು ಸೀಟು ಸಿಗದಿರುವ ಹಾಗೆ ನೋಡಿಕೋಳ್ಳುತ್ತೀನಿ, ಜನಕ್ಕೆಲ್ಲಾಬುದ್ಧಿ ಕಲುಸ್ತೀನಿ ಎಂದು ಕೂಗಾಡಿದ ಕೂಡಲೇ, ಮಹಿಳೆಯರಿಂದ ಹಾಗು ಕನ್ಯಾಮಣಿಗಳಿಂದ ಬಂದ ಪ್ರಶ್ಣೆಗಳು ಹೀಗಿವೆ.... ಅಲ್ರೀ ನೀವು ಹೇಗೆ ಹೀಗೆಲ್ಲಾ ಮಾತಾಡ್ತೀರೀ ? ನಾವೇನ್ ಮಾಡ್ಡಿದೀವಿ ನಿಮಗೆ ? ಮಾತಾಡ್ಬೇಕಾದ್ರೆ ನೋಡ್ಕೊಂಡ್ ಮಾತಾಡಿ, ಮರ್ಯಾದೆ ಇರ್ಲಿ ಸ್ವಲ್ಪ ಎಂದ ಕೂಡಲೇ,....
--ರೀ ನಿಮಿಗೇನ್ ಗೊತ್ತು ನನ್ ಕಷ್ಟ, ಮನೇಗ್ ಹೋದ್ರೆ ಮೈಬರೆ ಬರೋಥರ ಹೋಡಿತಾಳೆ, ಎಲ್ಲಾ ಕೆಲ್ಸ ನಾನೆ ಮಾಡ್ಬೇಕು, ಸಾಕಾಗಿದೆ ಈ ಹೆಂಗ್ಸಿಂದ ಎಂದ ತಕ್ಷಣ, ಹಲವಾರು ಮಹಿಳೆಯರ ಮೊಗದಲ್ಲಿ ಸಂತಾಪ ಸೂಚಕ ಛಾಯೆ ಮೂಡಿತು, ಇದನ್ನು ಗಮನಿಸಿದ ನನ್ನ ಸ್ನೇಹಿತನ ಮುಖದಲ್ಲಿ ಕಳವಳ ಮೂಡಿತು.......

ನನ್ನ ಹಾಗು ಇತರರ ಮೊಗದಲ್ಲಿ ನಗೆ ಬೀರುತ್ತಿತ್ತು, ಇದನ್ನು ಗಮನಿಸಿದ ಆ ಮನುಷ್ಯ ನೋಡಿ ಹೇಗೆ ನಗ್ತಾಇದಾರೆ ಇವ್ರು ಎಂದು ನನ್ನೆಡೆ ಇತರರ ಗಮನವನ್ನು ದೌಡಾಯಿಸಿದರು......... ಅಷ್ಟರಲ್ಲೇ ನಮ್ಮ ಆಸನದಲ್ಲಿ ಆಸೀನರಾಗಿದ್ದ ಮಹಿಳೆ ನಮ್ಮೆಡೆ ತಿರುಗಿ , ಅಲ್ರಪ್ಪ ನಿಮ್ಮ್ ಹುಡ್ಗಾಟ ಬೇರೆವ್ರಿಗೆ ಪ್ರಾಣ ಸಂಕಟ..!!, ಸ್ವಲ್ಪನಾದ್ರು ಮನುಷ್ಯತ್ವ ಬೇಡ್ವ ? ಸ್ವಲ್ಪ ಕನಿಕರ ಇರ್ಬೇಕು, ಬೆರೆಯೋರ ಕಷ್ಟಕ್ಕೆ ಇದೆ ಬೆಲೆ ಕೊಡೋದ ನೀವು? ಯೇನಾಗಿದೆ ನಿಮಿಗ್ಗೆಲ್ಲಾ ? ಎಂದು ನನ್ನ ಹಾಗು ನನ್ನ ವಯಸ್ಸನ್ನು ಹ್ಯೀಯಾಳಿಸಿದರು.
 
......ಆ ಕ್ಷಣದಲ್ಲಿ ಆ ಸನ್ನಿವೇಶ ನನ್ನ ಸ್ನೇಹಿತನಿಗೆ ಹಾಗು ನನಗೆ ಮೂಡಿಬಂದದ್ದು ಹೀಗೆ... ನಮ್ಮನ್ನು ಹಾಗು ನಮ್ಮ ವಯಸ್ಸನ್ನು ಬೈಯ್ಯುತ್ತಿರುವ ಮಹಿಳೆ ಯಾವುದೋ ರಾಜ್ಯದ ಮಹಾರಾಣಿ, ರತ್ನ ಖಚಿತ ಸಿಂಹಾಸನದ ಮೇಲೆ ಕುಳಿತು ನಮ್ಮ ತಪ್ಪನ್ನು ಮನ್ನಿಸ್ಲೆತ್ನಿಸುತ್ತಿದ್ದಾರೆಂದು... ಹೀಗೆ ನಾವು ಕಾರಣವಿಲ್ಲದೇ ಬಲಿಪಶುಗಳಾಗಿದ್ದನ್ನು ನೋಡಿ ಸ್ವಲ್ಪ ಜನರ ಮೊಗದಲ್ಲಿ ಹರ್ಷೊದ್ಗಾರ ಮೂಡಿಬಂದಂತೆ ಭಾಸವಾಯಿತು, ನನ್ನ ಸ್ನೇಹಿತ ಇದನ್ನು ಗಮನಿಸಿ ಯಾವುದೋ ತಂಗುದಾಣದಲ್ಲೇ ಇಳಿದುಬಿಟ್ಟ......

 ಬಸ್ಸಿಳಿದು ಮನೆಯವರೆಗೆ ನಡೆಯುವಹಾದಿಯಲ್ಲಿ ನನಗೆ ಬಂದ ಯೋಚನೆ ಹೀಗಿದೆ................ “ನಾಯಿಯನ್ನು ತನ್ನ ಬೀದಿಯಲ್ಲಿ ಬಿಟ್ಟರೆ ಅದು ಸಿಂಹ, ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟು ಬಿಟ್ಟುಕೊಟರೆ ಅದು ಸೀಂಹಾಸನ........”

ಆ ಸಮಯದಿಂದ ನನ್ನ ಹಾಗು ೮೦ಎ ಬಾಂಧವ್ಯ ಇನ್ನೂ ಬೆಳೆಯಿತು........... 
                                                                      -----ಸಂಕೇತ್  ಕಶ್ಯಪ್------

Monday, November 21, 2011

kannadave satya.........


ಒಂದು ಕವನ ಬರೆಯಬೇಕಾದರೆ ಸಾವಿರ ಪುಸ್ತಕಗಳ್ಳನ್ನು ಓದಿ ಸಾಹಿತ್ಯ ಭಂಡಾರ ಸಂಪಾದಿಸಿರಬೇಕು..... ಬರೆಯಬೇಕೆಂದು ಬರೆಯುತ್ತಾ ಹೋದರೆ ಅದು ಕವನವಾಗುವುದಿಲ್ಲ ಕಪಿತ್ವವಾಗುತ್ತದೆ... ನಮ್ಮ ಪ್ರತಿಷ್ಟೆಯ ಪಯೋಜನವೆಲ್ಲಿಯಾದರೂ ಆದರೆ, ನಮ್ಮ ಪ್ರತಿಷ್ಟೆಗೆ ಒಂದು ಅರ್ಥವಿರುತ್ತದೆ.
ಈ ಪ್ರತಿಷ್ಟೆಯನ್ನು ಉಳಿಸಿಕೊಳ್ಳುವದಿಕ್ಕೆ ನಮ್ಮ ಕನ್ನಡದಲ್ಲಿ ಬಹಳಷ್ಟು ಜನ ಭಾಷೆಯ ಪ್ರಯೋಗ ಮಾಡುತ್ತಾ ಈ ಭಾಷೆಯಲ್ಲಿರುವುದೇ ಇಷ್ಟಾ ಅನ್ನೊ ಮನೋಭಾವ ಇತರರಿಗೆ ಮೋಡಿಸುತ್ತಿದ್ದಾರೆ, ಪ್ರತಿಷ್ಟೆಯಮಧ್ಯೆ ಸಿಲುಕಿ ನಮ್ಮ ಕನ್ನಡ ತನ್ನ ತನವನ್ನು ಕಳೆದುಕೋಳ್ಳುತ್ತಿದೆ, ನಮ್ಮ ಕನ್ನಡ ಚಿತ್ರಗಳಲ್ಲಿ ಬರುತ್ತಿರುವ ಹಾಡುಗಳಾಗಲೀ ಅಥವ ಸಂಭಾಷಣೆಗಳಾಗಲಿ, ಯಾವುದೋ ಪರಭಾಷಾವ್ಯಮೋಹದಿಂದ ನಮ್ಮ ಕನ್ನಡಕ್ಕೆ ಧಕ್ಕೆ ತರುವ ಹಾಗಿರುತ್ತದೆ.

ಇತ್ತೀಚೆಗೆ ಬಂದ ಚಿತ್ರಗಳ ಹಾಡುಗಳು, ಕುರಿಯನ್ನು ಉದ್ದೇಶಿಸಿ ಇಲ್ಲವೇ ಕರಡಿಯನ್ನು ಉದ್ದೇಶಿಸಿ ಬರೆಯುವುದಾಗಿದೆ. ಹಾಗಂತ ಅವುಗಳ ವರ್ಣನೆ ಯನ್ನಾದರೂ ಮಾಡಿದ್ದರೆ ಒಂದು ಅರ್ಥವಿರುತ್ತಿತ್ತು. ಅದರ ಬದಲಿಗೆ ಅದನ್ನು ತಿನ್ನುವುದು ಹೇಗೆ ಅಥವ ಅದಕ್ಕೆ ತಿನ್ನಿಸುವುದು ಹೇಗೆಂದು ಬರೆಯಲಾಗಿದೆ. ಇದು ಹಾಡಿನ ಸ್ವರ ಸಂಯೋಜನೆಗೆ ಹಾಗು ಪರಭಾಷಿಯರಿಗೆ ಹಾಡಲು ಅನುಕೂಲ ಅವಷ್ಯಕತೆಗೆ ಬೇಕಾದಂತೆ ರಚಿಸಲಾಗಿರುವುದು ಶೋಚನೀಯ.
 
ಇತ್ತೀಚೆಗೆ ಬಂದ ಯಾವ ಹಾಡಾಗಲೀ ನಮ್ಮ ಮನದಲ್ಲಿ ಉಳಿಯುತ್ತಿಲ್ಲ, ಇದಕ್ಕೆ ಕಾರಣ ಹಾಡಿನ ಅರ್ಥ.  ಅರ್ಥಬಧ್ದವಾಗಿ ರಚಿಸಿದ, ಹಾಗು ಸಂದರ್ಭಕ್ಕೆ ಸಂಯೋಜಿಸಿದ್ದ ಎಲ್ಲಾ ಹಳೆಯ ಹಾಡುಗಳೂ ನಮ್ಮ ಮನದಲ್ಲೂ ಬಾಯಲ್ಲೂ ಉಳಿದಿದೆ. ಈ ರೀತಿ ಹಾಡುಗಳಾಗಲಿ ಅಥವ ಸಂಭಾಷಣೆಗಳಾಗಲೀ ಈಗೇಕೆ ಬರುತ್ತಿಲ್ಲ? ಕನ್ನಡ ಸಾಹಿತ್ಯಕ್ಕೇನು ಕೊರತೆ ಇಲ್ಲ. ರಚಿಸಿ ಹಾಡುಗಳನ್ನು ಸಂಭಾಷಣೆಗಳ್ಳನ್ನು, ಆದರೆ ಭಾಷೆಯ ಸಿರಿತನವನ್ನು ಅರಿತು ಅರ್ಥಬದ್ಧವಾಗಿ ರಚಿಸಿ. ಯಾವುದೋ ಒಂದು ಪರಿಸ್ಥಿತಿಗೆ ಸಿಲುಕಿ ಕನ್ನಡ ತನಕ್ಕೆ ಧಕ್ಕೆ ತರಬೇಡಿ....

                                                                                                                                                                                                                             ಸಂಕೇತ್ ಕಶ್ಯಪ್

80 A


ಸಮಾಧಾನ,ಸಂಯ್ಯಮ ಸಾಯಂಕಾಲದ ಹೊತ್ತಿಗೆ ಸಾಯುವಸ್ಥಿತಿಯಲ್ಲಿ ಬದುಕಿಸಿಟ್ಟುಕೊಳಲು ಸಾಮಾನ್ಯ ಸಂಚಾರಿ ಮನುಷ್ಯನಿಗೆ ಸಂಕಲ್ಪ ಮಾಡಿಕೊಂಡರೂ ಅಸಾಧ್ಯವಾದ ಸಹಜ ಸಂಗತಿ. ಒಬ್ಬ ಮನುಷ್ಯ, ಸಮಾಧಾನದಿಂದ ಸಂಜೆಯವರೆಗೆ ಸಂಯ್ಯಮ ಕಳೆದುಕೊಂಡು ಶಿಸ್ತನ್ನೂಮರೆತು ಸದಾ ಭರದಲ್ಲೇ ಎರಗುವ ಇತರ ಮನುಷ್ಯರೊಂದಿಗೆ ಸಹಕರಿಸುತ್ತಾನೆಂದರೆ ಇದು ಸಾಮಾನ್ಯವಾದ ಕಲೆ ಮಾತ್ರವಲ್ಲ.  ಇಂತಹ ಕಲೆಯನ್ನು ಹೊಂದಿದ ಮನುಷ್ಯ ಸಾಮಾನ್ಯನಾಗಿರುತ್ತಾನೆಂದು ಭಾವಿಸುವುದು ತಪ್ಪುಕಲ್ಪನೆಯೆಂದು ನನ್ನ ಭಾವನೆ.

೮೦ಎ ಬಸ್ಸು ಕೆಂಪೇಗೌಡ ಬಸ್ ನಿಲ್ದಾಣ ದಿಂದ ಮಹಲಕ್ಷ್ಮಿ ಲೇಔಟ್ ವರೆಗೆ ಪ್ರಯಾಣಿಕರನ್ನು ಕರೆದ್ಯೊಯುತ್ತದೆ. ಇದು ದಿನಕ್ಕೆ ೧೨ ಬಾರಿ ಒಡಾಡಲೇಬೆಕಾಗಿ ಕಡ್ಡಾಯ ಮಾಡಿದ್ದಾರೆ. ಈ ಮಾರ್ಗದ ಮಧ್ಯೆ ಬಹಳಷ್ಟು ತಂಗುದಾಣಗಳಿವೆ, ಬಹಳಷ್ಟು ಪ್ರಯಾಣಿಕರು ಸದಾ ಭರದಲ್ಲೇಯಿರುತ್ತಾರೆ.
ಸದಾ ಫ಼ುಟ್ ಬೊರ್ಡ್ ನಲ್ಲೇನಿಂತು ಪ್ರಯಾಣಿಸ ಬೇಕೆಂದು ಸ್ವಲ್ಪಜನ, ಓಡಾಡಿ ಸುಸ್ತಾಗಿ ಕಾಲುಸೋತು ನಿಲ್ಲುವುದಕ್ಕೂ ಜಾಗವಿಲ್ಲದೆ ಪರಿತಪಿಸುವ ಜನ,
ಬೇರೆಯವರ ಕಷ್ಟವನ್ನೂ ಲೇವಡಿಮಾಡಿ ಸಂತುಷ್ಟರಾಗೋ ಪಡ್ಡೆ ಜನ ಹೀಗೆ ಇನ್ನೂ ಹಲವಾರು ತರಹದ ಜನಗಳ ಗೋಜಿನಲ್ಲಿ೮೦ಎ ಬಸ್ಸಿನ ಪ್ರಯಾಣ ಜರಗುವುದು.

 ಇಂತಹ ಸನ್ನಿವೇಷದಲ್ಲೂ ಸಮಂಜಸವಾಗಿ ಎಲ್ಲರಿಗೂ ಚೀಟಿಯನ್ನು ಹರಿದು ಚಿಲ್ಲರೆಯನ್ನು ಕೊಟ್ಟು ಸಮಾಧಾನದಿಂದ ಯಾರಿಗೂ ಅಗೌರವ ತೊರಿಸದೇ ವರ್ತಿಸುವ ವ್ಯಕ್ತಿಯನ್ನು ನೊಡಿ ಆಶ್ಚರ್ಯವಾಗುವುದರಲ್ಲಿ ಸಂದೇಹವಿಲ್ಲ. ಆ ದಿನ ಆ ಮನುಷ್ಯನ ೧೨ನೇ ಅಂದರೆ ಕೊನೆಯ ಸರದಿಯ ಪ್ರಯಾಣ. ಹೀಗೆ ಕೂತು ಕೆಲಸವಿಲ್ಲದೆ ಈ ಮನುಷ್ಯನ ನಡವಳಿಕೆಯನ್ನು ಗಮನಿಸಿದ ಕೊಡಲೇ ಮಾತಾಡಲೇ ಬೇಕೆಂಬ ಮನೋಭಾವ ಮನಸ್ಸಿನಲ್ಲಿ ಮೂಡಿ ಮಾತಾಡಿಸಿದಾಗಬಂದ ನುಡಿಗಳು ಹೀಗಿವೆ......

ಸಾರ್ ಏನ್ ಮಾಡದು ಜನ ಪಾಪ ಬೆಳಿಗ್ಗೆ ಇಂದ ಕೆಲ್ಸ ಮಾಡಿ ಬೇಸತ್ತು ಮನೆಗೆ ಹೊಗ್ ಬೇಕು ಅಂತ ಬಸ್ಸ್ ಹತ್ತುತಾರೆ, ಅವ್ರಿಗ್ ಯಾಕ್ ಸಾರ್ ಬೇಜಾರ್ ಮಾಡ್ಬೇಕು. ಅಲ್ ನಿಲ್ಬೇಡಿ ಇಲ್ ನಿಲ್ಬೇಡಿ, ಚಿಲ್ಲರೆ ಕೊಡ್ರಿ, ಒಳಗ್ ಹೋಗ್ರಿ ಜಾಗ ಇದೆ ಅಂದ್ರೆ ಬೇಜಾರಾಗಿ ಸುಮ್ನೆ ಆಗೊರು ಇದ್ದಾರೆ, ಹಾಗೆ ಮೈ ಮೇಲೆ ಬರೋರು ಇದಾರೆ. ಈ ಎಲ್ಲಾ ಲಕ್ಷಣಗಳೂ ಬೇಜಾರು ಮತ್ತೆ ಸುಸ್ತಿಂದಲೆ ಅಲ್ವಸಾರ್ ??? ಅದುನ್ನೆಲ್ಲ ಮನ್ಸಿಗೆ ಹಚ್ಕೊಳಕ್ಕಗತ್ತಾ ಸಾರ್ ?
" ಇದೆಲ್ಲ ಆಗ್ಬಾರ್ದು ಅಂತಲೇ ಸಾರ್ ನಾನು ಒಳ್ಗಡೆ ಇಂದ ಚೀಟಿ ಕೊಡಕ್ಕೆ ಶುರು ಮಾಡ್ತಿನಿ. ಹಾಗೆ ಹೆಗಿದ್ದೀರ? ಕೆಲ್ಸ ಆಯಿತ ಸ್ವಾಮಿ ಅಂತಲೆ ಮಾತಾಡುಸ್ತ ಚೀಟಿ ಹರಿತ ಜಾಗಮಾಡಿ ನಿಲ್ಲುಸ್ತಾಬರ್ತೀನಿ. ಜನ ಹಾಗೆ ಒಳ್ಗಡೇಕ್ ಸರಿತಾಬರ್ತಾರೆ. ನಮ್ ಜನ ಹೇಗೆ ಅಂದ್ರೆ, ಸುಮ್ನೆ ಏನ್ ಸಾರ್ ಹೆಗಿದ್ರಿ ಅಂದ್ರೆ ಸಾಕು ಸಹಾನುಭೂತಿ ತೋರುಸ್ತಾರೆ, ಹೇಳಿದ್ದಿಕ್ಕೆ ಸರಿಯಾಗಿ ಕೈ ಜೋಡುಸ್ತಾರೆ. ಅದಕ್ಕೆ ಸಾರ್ ನಾನ್ ಎಲ್ಲಾರ್ನು ಹೀಗ್ ಮತಾಡ್ಸಿ ನನ್ ಕೆಲ್ಸಕ್ಕೆ ಸುಲಭ ಮಡ್ಕೊಳ್ತಿನಿ.

-- "ಇದುನ್ನ ೧೨ನೇ ಸರದಿಯ ಪ್ರಯಾಣದಲ್ಲೂ ಮಾಡ್ತಿದೀರಲ್ಲ,
ಇದು ಕಷ್ಟ ಆಗೊಲ್ವ? ಇಷ್ಟೊಂದು ತಾಳ್ಮೆ ಇರತ್ತಾ ನಿಮಿಗೆ ? " ಅನ್ನೊ ಪ್ರಷ್ನೆಗೆ ಆ ಮನುಷ್ಯನ ಉತ್ತರ ಹೀಗಿದೆ...

 ಕಷ್ಟ ಅನ್ನೋಮಾತ್ ಹೆಗ್ಸಾರ್ ಬರತ್ತೇ ? ನಾನು ಇದೇ ವ್ರುತ್ತಿಯಲ್ಲಿರೋದು. ನಾನು ಹೀಗೆ ಅಭ್ಯಾಸ ಮಡ್ಕೊಂಡ್ ಬಂದೆ ಮೊದ್ಲಿಂದಲೂ. ಅದಿಕ್ಕೆ ಹೀಗಿರೊದಿಕ್ಕೆ ಕಷ್ಟ ಅನ್ನೊದು ನನಿಗ್ ನಗು ಬರ್ಸೊ ವಿಚಾರ ಸಾರ್.....

--ಸರಿ ನೀವು ಜನನ್ನ ಅರ್ಥ ಮಾಡ್ಕೊಳಕ್ಕಾದ್ರು ಕಷ್ಟಪಟ್ಟಿರ್ತೀರ ಅಲ್ವ ?

ಸಾರ್, ಜನನ್ನ ಅರ್ಥ ಮಡ್ಕೊಳೊದು ಸುಲಭ, ಚಿಲ್ಲರೆ ವಿಚಾರ ಬಂದ್ರೆ ಸಾಕು ಅರ್ಥ ಮಾಡ್ಕೊಂಡ್ ಬಿಡ್ತೀನಿ. ಜನ್ರು ಚಿಲ್ಲರೆ ಬುದ್ಧಿ ಇಂದಲೇ ಗುರ್ತು ಮಾಡ್ಕೊಳ್ತಾರೆ ಸಾರ್, ಅದು ತುಂಬ ಕಷ್ಟವಾದ ವಿಚಾರ ನಿಮಿಗೆಲ್ಲಾ ಅರ್ಥ ಮಾಡ್ಸದಿಕ್ಕೆ ಬಿಡಿ .....ಎಲ್ಲಾ ಜನರಲ್ಲೂ ಚಿಲ್ಲರೆ ತೊಂದರೆ ಇದ್ದೇ ಇರತ್ತೆ ಸಾರ್ ಅದಿಕ್ಕೇನ್ ಮಡ್ಲಿಕ್ಕಾಗಲ್ಲ. ಒಂದ್ ಒಂದ್ಸಲಿ ಸುಮ್ ಸುಮ್ನೆ ಕ್ಯಾತೆ ಶುರು ಮಾಡಿ ಪ್ರಯಾಣಿಕ್ರು ಗಮನ ಸೆಳೆದು ಕಳ್ತನ ಮಾಡೊ ಕಳ್ಳ್ನನ್ ಮಕ್ಕ್ಳು ಹತ್ತುತ್ತಾರೆ. ಅವ್ರುನ್ನ ಅರ್ಥ ಮಾಡ್ಕೊಂಡು ಕಳ್ತನ ತಡೊಯೊದು ಸ್ವಲ್ಪ ಕಷ್ಟನೇ ಸಾರ್...........


--ಸರಿ ಸಾರ್, ನಮಿಗ್ ಅರ್ಥ ಮಡ್ಕೊಳೊದ್ಯಾಕೆ ಕಷ್ಟ ಆಗತ್ತೆ? ಅಂತಹ ಕ್ಲಿಷ್ಟವಾದುದ್ದೇನಿದೆ ಇದ್ರಲ್ಲಿ?
ಹೇಳುದ್ನಲ ಸಾರ್ ಚಿಲ್ಲರೆ ವಿಚಾರ ಅಂತ ಬಿಡಿ............

--ಚಿಲ್ಲರೆ ವಿಚಾರ ಸರಿ ಸಾರ್, ಆದ್ರೆ ಸ್ವಲ್ಪ ಅರ್ಥ ಮಾಡ್ಸಿ ನಮಿಗೂ.....
ಅಯ್ಯೊ ಸಾರ್ ಬಿಡಿ...ನಿಮ್ಮ ಸ್ಟಾಪ್ ಬಂತು ಇಳೀರಿ...................

ಒಬ್ಬ ಚೀಟಿವಾಹಕನನ್ನು ನಾವು ಸಮಾಜದಲ್ಲಿ ಪರಿಕಲ್ಪಿಸುವುದು ಸಾಮಾನ್ಯ ವೆಂಬ ಕೀಳು ಭಾವನೆ ಹುಟ್ಟಿಸುವಂತಹ ಪದದಿಂದ, ಅವರ ಸಾಮಾನ್ಯ ವಾದ ನಡೆನುಡಿಗಳು ನಮಗೆ ಅಸಮಾನ್ಯ.  ಸಂಯಮ, ಸಮಾಧಾನ ಹಾಗು ಸರಳತೆಯನ್ನು ತನ್ನ ವ್ರುತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಹತ್ತರವಾದ ಸಂಗತಿ. ನಮ್ಮ ಮನಸ್ಸು ಸ್ವಲ್ಪ ಅವ್ಯವಸ್ಥಿತವಾದರು ನಮ್ಮ ನಡೆನುಡಿಗಳ ಹಿಡಿತ ಯಾರ ಕೈಯಲ್ಲಿರುವುದೋ , ನಾವು ಏನುಮಾಡುತ್ತೀವೊ ಅದು ಸಹ ತಿಳಿಯದ ಸಂಗತಿ.ಇಂತಹ ಮನಸ್ಥಿತಿಯಲ್ಲಿ ನಾವೇನೇ ಮಾಡಿದರು ಅದು ಹಾಳೆ.........
ಈ ರೀತಿ ಅಭ್ಯಾಸ ಬಲದಿಂದ ಇಂತಹ ಅತ್ಯಾವಶ್ಯಕವಾದ ಸಮಾಧಾನ ತಂದುಕೊಂಡು ಸಮಾಜವನ್ನು ತನ್ನ ಮಾರ್ಗದಲ್ಲಿ ನಿಖರವಾಗಿ ವಿಶ್ಲೇಷಿಸಿ, ಎಲ್ಲರಿಗೂ ತನ್ನ ಸಹಾನುಭೂತಿಯನ್ನು ಕರುಣಿಸಿ, ತನ್ನ ವ್ರುತ್ತಿಯನ್ನು ಪಾರಂಗತವಾಗಿ ನಡೆಸಿಕೊಂಡು ೮೦ ಎ ಬಸ್ಸಿನಲ್ಲಿ ಚಿಟಿನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಅಸಮಾನ್ಯ ಸ್ವಚ್ಛ ಮನಸ್ಸಿನ ಮನುಷ್ಯನಿಗೆ ವಂದನೆ.......
|
|
|
ಬಸ್ಸಿಳಿದು ಅದೇಯೊಚನೆಯಲ್ಲಿ ಮುಂದಿನದಿನಗಳಲ್ಲಿ ಅದೇ ಬಸ್ಸಿಗಾಗಿ ಕಾದು ಹಲವಾರು ಬಾರಿ ಪ್ರಯಾಣಿಸಿದಮೇಲೆ ತಿಳಿಯಿತು ಚಿಲ್ಲರೆ ಹಾಗು ಮನುಷ್ಯನ ಮಧ್ಯೆಯಿರುವ ಬೆಸುಗೆಯ ಬಾಂಧವ್ಯ....!!!
                                               
                                                                                                                                                                                                                                                                                                                                                           
                                                                                                                       
..... ಸಂಕೇತ್ ಕಶ್ಯಪ್.....