Friday, November 25, 2011

80A ನಲ್ಲಿ ಒಂದು ದಿನ.............


80A ನಲ್ಲಿ ಒಂದು ದಿನ.............

ಬಿಸಿಲಿನ ಬೇಗೆ ಬೆಂದಕಾಳೂರಿನ ಜನಸಾಮಾನ್ಯರನ್ನು ಬೇಯಿಸುತಿತ್ತು, ಅಂದು ಫಾಲ್ಗುಣ ಮಾಸದ ಒಂದು ದಿನ. ಹೀಗೆ ಮನೆಗೆ ಸೇರಲೆಂದು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕಾಯುತ್ತಾನಿಂತಿದ್ದ ಬಹಳಷ್ಟು ಜನ ಬೇಸತ್ತು, ನಿಲ್ಲುವುದಕ್ಕೂ ತ್ರಾಣವಿಲ್ಲದೆ ಹಾತೊರೆಯುತ್ತಿರಬೇಕಾದರೆ........
--ನಮ್ಮ್ ಸರ್ಕಾರ ಸರಿಇಲ್ಲ್ರಪ, ನೋಡಿ ಇಷ್ಟ್ ಹೊತ್ತಾದ್ರು ೧ ಬಸಿಲ್ಲ ೮೦ಎ, ಇಷ್ಟೊಂದ ಬಿಸಿಲು ? ಎಷ್ಟೊಂದು ಸಖೆ ? ಮಳೆನೂಬರಲ್ಲಾ, ಎಷ್ಟೊಂದ್ ಜನ ? ನಮ್ ವಿಷ್ಣುವರ್ಧನ್ ಸಹಿತಾ ಹೋಗ್ಬಿಟ್ರು, ಮುಂದಿನಸಲ ಈ ಸರ್ಕಾರಕ್ಕೆ ಮತ ಕೊಡ್ಬಾರ್ದು, ಮತ್ತೆ ಈ ಸರ್ಕಾರ ಆಡಳಿತಕ್ಕೆ ಬರಬಾರದು... ಅನ್ನೊಶಬ್ದಗಳ ಸುರಿಮಳೆಯಾಗುತಿತ್ತು.

 ಹಾಗೆ ಒಬ್ಬರು ಇನ್ನೊಬ್ಬರನ್ನು ಸಂತೈಸುತ್ತಾ, ಒಬ್ಬರ ಮೇಲ್ ಒಬ್ಬರು ಕರುಣೆತೋರಿಸುತ್ತಾ, ತಮ್ಮ ತಮ್ಮ ದುಗುಡಗಳನ್ನು ಹಂಚಿಕೊಳುತ್ತಾ ನಿಂತಿರಬೇಕಾದರೆ,.....-- ಏನ್ಸಾರ್ ನೀವೇನು ಮಾತಾಡ್ತನೆಇಲ್ವಲ? ಒಳಗ್ ಒಳಗೇ ನೆಗಿತಿದಿರೀ( ನಗ್ಗುತಾ ಇದ್ದಿರೀ?) ? ನಿಮಿಗೇನು ಅನ್ಸಲ್ವಾ ನಮ್ಮ್ ಬಗ್ಗೆ ಅಂತ ಒಬ್ಬ ಮಹಾಶಯರಿಂದ ಪ್ರಶ್ನೆ ಕೇಳಿಬಂತು..... ಆಗಲೇ ಗೊತ್ತಾದದ್ದು, ನನಗೇ ಒಂದು ಸಮಸ್ಯೆ ಎದುರಾಗುತ್ತಿದೆ ಎಂದು..!!!

--ಏನ್ ಸಾರ್ ನಾವೆಲ್ಲಾ ಹೀಗೆ ಮಾತಾಡ್ತಿದ್ರೆ ನೀವೇನು ನೆಗಿತಿದಿರೀ? ನೀವು --ರಾಜಕೀಯದೋರ ಅಥವ ಸರ್ಕಾರೀ ಕೆಲಸದಲ್ಲಿರೋದ ಎಂಬ ಪ್ರಶ್ಣೆ ನನಗೆ ಎದುರಾಯಿತು ?  ನಾನು ನಗುತಡೆಯಲಾರದೇ, ಇಲ್ಲಾ ಸಾರ್, ನಾನು ವಿದ್ಯಾರ್ಥಿ ಅನ್ನುವಹೊತ್ತಿಗೆ ಜನ ನನ್ನೆಡೆ ಓಡಿ ನುಗ್ಗಿ ಬರುತ್ತಿದ್ದರು, ಅವರ ಮುಖದಲ್ಲಿ ಏನೋ ಗಲಿಬಿಲಿಯ ಸಂತಸದ ಛಾಯೆ ಮೂಡಿತ್ತು , ನನ್ನ ಪಕ್ಕದಲೇ ನಿಂತಿದ್ದ ನನ್ನ ಸ್ನೇಹಿತ ಕಂಗಾಲಾದದ್ದನ್ನು ನೋಡಿ ನನಗೂ ದುಗುಡವಾಗಿ ಇವರಿಂದ ತಪ್ಪಿಸಿಕೊಳೊಣವೆಂದು ತಿರುಗಿದ ಕ್ಷಣವೇ ತಿಳಿದಿದ್ದು ೮೦ಎ ಷಟ್  ಚಕ್ರ ದೂಮ್ರಷಟಕ ನಿಲ್ದಾಣದಲ್ಲಿ ಮಿಕ್ಕ ಜನರಿಗೆಲ್ಲಾ ಕಾಣಿಸಿದೆ ಎಂದು...!!!
ಹೀಗೆ ನಾವು ಬಸ್ಸ್ ಏರಿದ ಕೂಡಲೇ ನಮಗೆ ಆಸನ ಸಿಕ್ಕಿತಾದಕಾರಣ ನಮಗೆ ಇತರರನ್ನು ನೊಡುವ ಸಮಯ ಓದಗಿತು, ಹೀಗೆ ನೋಡುತ್ತಿರಬೇಕಾದರೆ, ನಿನ್ಮನೆ ಎಕ್ಕೂಟ್ ಹೋಗ ದಬ್ತೀಯಲ್ಲೊ ಸ್ವಲ್ಪ ತಡಿಯೋ, ದರಿದ್ರದೊನೆ ಸೀಟ್ ಬೇಕಾದ್ರೆ ಹೀಗೆ ತಳ್ ಬೇಕು, ನುಗ್ಗು ನುಗ್ಗು ಮುಂದೆ, ಬೇಗ್ ಹತ್ತಲೇ .....ಮಗನೇ, ಥು ಎಂತ ದರಿದ್ರ ಜನನಪ್ಪ ಸಾಯ್ತರೆ.... ಹೀಗೆ ಇನ್ನೂ ಹಲವಾರು ಬೈಗುಳಗಳ ನಡುವೆ ೮೦ಎ ಕ್ಷಣ ಮಾತ್ರದಲ್ಲಿ ತುಂಬಿತು.... ನಾವು ಅಂಗವಿಕಲರಿಗೆ ಕಾದಿರಿಸಿದ ಆಸನದ ಹಿಂದೆ ಆಸೀನರಾಗಿದ್ದೆವು. ನಮ್ಮ ಎದುರು ಸಾಲಿನಲ್ಲಿ ನನಗೆ ಪ್ರಶ್ಣೆಯನ್ನು ಕೇಳಿ, ಒಂದು ಕ್ಷಣ ದುಗುಡಕ್ಕೆ ಸಿಲುಕಿಸಿದ ವ್ಯಕ್ತಿ ಕೂತ್ತಿದ್ದರು. ಹೀಗೆ ಒಬ್ಬ ಮಹಿಳೆ ಅವರಿಗೆ, ಇದು ಲೇಡಿಸ್ ಸೀಟ್ ಅಲ್ವ ಸಾರ್ ? ಎಂದು ಕೇಳಿದ್ದೇ ತಡ...
--ಅಲ್ರಿ ಏನ್ ಅನ್ಕೊಂಡಿದಿರೀ? ಎಲ್ಲಾ ಸೀಟು ನಿಮ್ದೇನಾ? ಅಂಗವಿಕಲರೂ ಎಂದರೆ ಲೇಡಿಸ್ ಅಂತನಾ ? ಎಂದು ಗದರಿಸುವ ಧಾಟಿಯಲ್ಲಿ ಕೇಳಿದರು. ಆ ಮಹಿಳೆ ಹಿಂಜರೆದು ನಿಂತರಾದರೂ ಅವರ ಕಣ್ಣು ನಮ್ಮಮೇಲೆ ಬಿತೋ ಎನ್ನುವ ಮನೋಭಾವ ನಮ್ಮಲ್ಲಿ ಮೂಡಿತೋ ತಿಳಿಯಲಿಲ್ಲ, ನಾವು ನಮ್ಮ ಆಸನವನ್ನು ಆ ಮಹಿಳೆಗೆಂದು ಬಿಟ್ಟುಕೊಟ್ಟೆವು. ಅದನ್ನು ನೋಡಿ ಆ ಮನುಷ್ಯ….
--ಯಾಕ್ರಪ್ಪ ? ನೀವ್ ನನಿಗಾದ್ರೆ ಬಿಟಿರ್ತಿದ್ರ ಸೀಟು? ಅವ್ರಿಗ್ ಹೇಗ್ ಬಿಟ್ಕೋಟ್ರಿ? ಹೀಗ್ ಮಾಡರಿಂದಲೆ ಅವ್ರು ತಲೆಮೇಲ್ ಹತ್ಕೊಳದು ತಿಳ್ಕೊರಿ ಎಂದು ನಮಗೆ ವೇದ ಪಠನ ಮಾಡಿಸಿದರು, ಸ್ವಲ್ಪ ಹೊತ್ತು ಕರಾಳ ನಿಶಬ್ದವಾತಾವರಣ ಮೂಡಿತು. ಬಸ್ಸು ಇನ್ನೂ ನಿಲ್ದಾಣವನ್ನು ಬಿಟ್ಟಿರಲಿಲ್ಲ, ಎಲ್ಲಿಂದಲೋ ಒಂದು ಕೂಗು ಬಂತು, ಲೇ ದರಿದ್ರ ಡ್ರೈವರ್ ಹೊರ್ಡೊ ಬೇಗ ಎಂದು ಮೂಡಿಬಂತು. ತಕ್ಷಣ ಈ ವಿಚಿತ್ರ ಮನುಷ್ಯ ತನ್ನ ಗುಣಕ್ಕಣುಗುಣವಾಗಿ ಗೊಣಗಲು ಆರಂಭಿಸಿದ.....--ಅಲ್ಲಾ ಸರ್ಕಾರಕ್ಕೆ ತೆಲೆನೇ ಇಲ್ಲ, ಈ ಬಸ್ ಡ್ರೈವರ್ ಗೆಲ್ಲಾ ಯಾಕ್ ಕೆಲ್ಸಕೊಡ್ತಾರೋ ಏನೋ, ನನಿಗೇನಾದ್ರು ಅಧಿಕಾರಕೊಟ್ರೆ ಈ ಡ್ರೈವರ್ನೆಲ್ಲಾ ಹೊಗೆ ಹಾಕುಸ್ಬಿಡ್ತೀನಿ, ಹಾಗೆ ಮಹಿಳೆಯರಿಗೆ ಒಂದು ಸೀಟು ಸಿಗದಿರುವ ಹಾಗೆ ನೋಡಿಕೋಳ್ಳುತ್ತೀನಿ, ಜನಕ್ಕೆಲ್ಲಾಬುದ್ಧಿ ಕಲುಸ್ತೀನಿ ಎಂದು ಕೂಗಾಡಿದ ಕೂಡಲೇ, ಮಹಿಳೆಯರಿಂದ ಹಾಗು ಕನ್ಯಾಮಣಿಗಳಿಂದ ಬಂದ ಪ್ರಶ್ಣೆಗಳು ಹೀಗಿವೆ.... ಅಲ್ರೀ ನೀವು ಹೇಗೆ ಹೀಗೆಲ್ಲಾ ಮಾತಾಡ್ತೀರೀ ? ನಾವೇನ್ ಮಾಡ್ಡಿದೀವಿ ನಿಮಗೆ ? ಮಾತಾಡ್ಬೇಕಾದ್ರೆ ನೋಡ್ಕೊಂಡ್ ಮಾತಾಡಿ, ಮರ್ಯಾದೆ ಇರ್ಲಿ ಸ್ವಲ್ಪ ಎಂದ ಕೂಡಲೇ,....
--ರೀ ನಿಮಿಗೇನ್ ಗೊತ್ತು ನನ್ ಕಷ್ಟ, ಮನೇಗ್ ಹೋದ್ರೆ ಮೈಬರೆ ಬರೋಥರ ಹೋಡಿತಾಳೆ, ಎಲ್ಲಾ ಕೆಲ್ಸ ನಾನೆ ಮಾಡ್ಬೇಕು, ಸಾಕಾಗಿದೆ ಈ ಹೆಂಗ್ಸಿಂದ ಎಂದ ತಕ್ಷಣ, ಹಲವಾರು ಮಹಿಳೆಯರ ಮೊಗದಲ್ಲಿ ಸಂತಾಪ ಸೂಚಕ ಛಾಯೆ ಮೂಡಿತು, ಇದನ್ನು ಗಮನಿಸಿದ ನನ್ನ ಸ್ನೇಹಿತನ ಮುಖದಲ್ಲಿ ಕಳವಳ ಮೂಡಿತು.......

ನನ್ನ ಹಾಗು ಇತರರ ಮೊಗದಲ್ಲಿ ನಗೆ ಬೀರುತ್ತಿತ್ತು, ಇದನ್ನು ಗಮನಿಸಿದ ಆ ಮನುಷ್ಯ ನೋಡಿ ಹೇಗೆ ನಗ್ತಾಇದಾರೆ ಇವ್ರು ಎಂದು ನನ್ನೆಡೆ ಇತರರ ಗಮನವನ್ನು ದೌಡಾಯಿಸಿದರು......... ಅಷ್ಟರಲ್ಲೇ ನಮ್ಮ ಆಸನದಲ್ಲಿ ಆಸೀನರಾಗಿದ್ದ ಮಹಿಳೆ ನಮ್ಮೆಡೆ ತಿರುಗಿ , ಅಲ್ರಪ್ಪ ನಿಮ್ಮ್ ಹುಡ್ಗಾಟ ಬೇರೆವ್ರಿಗೆ ಪ್ರಾಣ ಸಂಕಟ..!!, ಸ್ವಲ್ಪನಾದ್ರು ಮನುಷ್ಯತ್ವ ಬೇಡ್ವ ? ಸ್ವಲ್ಪ ಕನಿಕರ ಇರ್ಬೇಕು, ಬೆರೆಯೋರ ಕಷ್ಟಕ್ಕೆ ಇದೆ ಬೆಲೆ ಕೊಡೋದ ನೀವು? ಯೇನಾಗಿದೆ ನಿಮಿಗ್ಗೆಲ್ಲಾ ? ಎಂದು ನನ್ನ ಹಾಗು ನನ್ನ ವಯಸ್ಸನ್ನು ಹ್ಯೀಯಾಳಿಸಿದರು.
 
......ಆ ಕ್ಷಣದಲ್ಲಿ ಆ ಸನ್ನಿವೇಶ ನನ್ನ ಸ್ನೇಹಿತನಿಗೆ ಹಾಗು ನನಗೆ ಮೂಡಿಬಂದದ್ದು ಹೀಗೆ... ನಮ್ಮನ್ನು ಹಾಗು ನಮ್ಮ ವಯಸ್ಸನ್ನು ಬೈಯ್ಯುತ್ತಿರುವ ಮಹಿಳೆ ಯಾವುದೋ ರಾಜ್ಯದ ಮಹಾರಾಣಿ, ರತ್ನ ಖಚಿತ ಸಿಂಹಾಸನದ ಮೇಲೆ ಕುಳಿತು ನಮ್ಮ ತಪ್ಪನ್ನು ಮನ್ನಿಸ್ಲೆತ್ನಿಸುತ್ತಿದ್ದಾರೆಂದು... ಹೀಗೆ ನಾವು ಕಾರಣವಿಲ್ಲದೇ ಬಲಿಪಶುಗಳಾಗಿದ್ದನ್ನು ನೋಡಿ ಸ್ವಲ್ಪ ಜನರ ಮೊಗದಲ್ಲಿ ಹರ್ಷೊದ್ಗಾರ ಮೂಡಿಬಂದಂತೆ ಭಾಸವಾಯಿತು, ನನ್ನ ಸ್ನೇಹಿತ ಇದನ್ನು ಗಮನಿಸಿ ಯಾವುದೋ ತಂಗುದಾಣದಲ್ಲೇ ಇಳಿದುಬಿಟ್ಟ......

 ಬಸ್ಸಿಳಿದು ಮನೆಯವರೆಗೆ ನಡೆಯುವಹಾದಿಯಲ್ಲಿ ನನಗೆ ಬಂದ ಯೋಚನೆ ಹೀಗಿದೆ................ “ನಾಯಿಯನ್ನು ತನ್ನ ಬೀದಿಯಲ್ಲಿ ಬಿಟ್ಟರೆ ಅದು ಸಿಂಹ, ಬಿ.ಎಮ್.ಟಿ.ಸಿ ಬಸ್ ನಲ್ಲಿ ಸೀಟು ಬಿಟ್ಟುಕೊಟರೆ ಅದು ಸೀಂಹಾಸನ........”

ಆ ಸಮಯದಿಂದ ನನ್ನ ಹಾಗು ೮೦ಎ ಬಾಂಧವ್ಯ ಇನ್ನೂ ಬೆಳೆಯಿತು........... 
                                                                      -----ಸಂಕೇತ್  ಕಶ್ಯಪ್------

4 comments: