Monday, November 21, 2011

80 A


ಸಮಾಧಾನ,ಸಂಯ್ಯಮ ಸಾಯಂಕಾಲದ ಹೊತ್ತಿಗೆ ಸಾಯುವಸ್ಥಿತಿಯಲ್ಲಿ ಬದುಕಿಸಿಟ್ಟುಕೊಳಲು ಸಾಮಾನ್ಯ ಸಂಚಾರಿ ಮನುಷ್ಯನಿಗೆ ಸಂಕಲ್ಪ ಮಾಡಿಕೊಂಡರೂ ಅಸಾಧ್ಯವಾದ ಸಹಜ ಸಂಗತಿ. ಒಬ್ಬ ಮನುಷ್ಯ, ಸಮಾಧಾನದಿಂದ ಸಂಜೆಯವರೆಗೆ ಸಂಯ್ಯಮ ಕಳೆದುಕೊಂಡು ಶಿಸ್ತನ್ನೂಮರೆತು ಸದಾ ಭರದಲ್ಲೇ ಎರಗುವ ಇತರ ಮನುಷ್ಯರೊಂದಿಗೆ ಸಹಕರಿಸುತ್ತಾನೆಂದರೆ ಇದು ಸಾಮಾನ್ಯವಾದ ಕಲೆ ಮಾತ್ರವಲ್ಲ.  ಇಂತಹ ಕಲೆಯನ್ನು ಹೊಂದಿದ ಮನುಷ್ಯ ಸಾಮಾನ್ಯನಾಗಿರುತ್ತಾನೆಂದು ಭಾವಿಸುವುದು ತಪ್ಪುಕಲ್ಪನೆಯೆಂದು ನನ್ನ ಭಾವನೆ.

೮೦ಎ ಬಸ್ಸು ಕೆಂಪೇಗೌಡ ಬಸ್ ನಿಲ್ದಾಣ ದಿಂದ ಮಹಲಕ್ಷ್ಮಿ ಲೇಔಟ್ ವರೆಗೆ ಪ್ರಯಾಣಿಕರನ್ನು ಕರೆದ್ಯೊಯುತ್ತದೆ. ಇದು ದಿನಕ್ಕೆ ೧೨ ಬಾರಿ ಒಡಾಡಲೇಬೆಕಾಗಿ ಕಡ್ಡಾಯ ಮಾಡಿದ್ದಾರೆ. ಈ ಮಾರ್ಗದ ಮಧ್ಯೆ ಬಹಳಷ್ಟು ತಂಗುದಾಣಗಳಿವೆ, ಬಹಳಷ್ಟು ಪ್ರಯಾಣಿಕರು ಸದಾ ಭರದಲ್ಲೇಯಿರುತ್ತಾರೆ.
ಸದಾ ಫ಼ುಟ್ ಬೊರ್ಡ್ ನಲ್ಲೇನಿಂತು ಪ್ರಯಾಣಿಸ ಬೇಕೆಂದು ಸ್ವಲ್ಪಜನ, ಓಡಾಡಿ ಸುಸ್ತಾಗಿ ಕಾಲುಸೋತು ನಿಲ್ಲುವುದಕ್ಕೂ ಜಾಗವಿಲ್ಲದೆ ಪರಿತಪಿಸುವ ಜನ,
ಬೇರೆಯವರ ಕಷ್ಟವನ್ನೂ ಲೇವಡಿಮಾಡಿ ಸಂತುಷ್ಟರಾಗೋ ಪಡ್ಡೆ ಜನ ಹೀಗೆ ಇನ್ನೂ ಹಲವಾರು ತರಹದ ಜನಗಳ ಗೋಜಿನಲ್ಲಿ೮೦ಎ ಬಸ್ಸಿನ ಪ್ರಯಾಣ ಜರಗುವುದು.

 ಇಂತಹ ಸನ್ನಿವೇಷದಲ್ಲೂ ಸಮಂಜಸವಾಗಿ ಎಲ್ಲರಿಗೂ ಚೀಟಿಯನ್ನು ಹರಿದು ಚಿಲ್ಲರೆಯನ್ನು ಕೊಟ್ಟು ಸಮಾಧಾನದಿಂದ ಯಾರಿಗೂ ಅಗೌರವ ತೊರಿಸದೇ ವರ್ತಿಸುವ ವ್ಯಕ್ತಿಯನ್ನು ನೊಡಿ ಆಶ್ಚರ್ಯವಾಗುವುದರಲ್ಲಿ ಸಂದೇಹವಿಲ್ಲ. ಆ ದಿನ ಆ ಮನುಷ್ಯನ ೧೨ನೇ ಅಂದರೆ ಕೊನೆಯ ಸರದಿಯ ಪ್ರಯಾಣ. ಹೀಗೆ ಕೂತು ಕೆಲಸವಿಲ್ಲದೆ ಈ ಮನುಷ್ಯನ ನಡವಳಿಕೆಯನ್ನು ಗಮನಿಸಿದ ಕೊಡಲೇ ಮಾತಾಡಲೇ ಬೇಕೆಂಬ ಮನೋಭಾವ ಮನಸ್ಸಿನಲ್ಲಿ ಮೂಡಿ ಮಾತಾಡಿಸಿದಾಗಬಂದ ನುಡಿಗಳು ಹೀಗಿವೆ......

ಸಾರ್ ಏನ್ ಮಾಡದು ಜನ ಪಾಪ ಬೆಳಿಗ್ಗೆ ಇಂದ ಕೆಲ್ಸ ಮಾಡಿ ಬೇಸತ್ತು ಮನೆಗೆ ಹೊಗ್ ಬೇಕು ಅಂತ ಬಸ್ಸ್ ಹತ್ತುತಾರೆ, ಅವ್ರಿಗ್ ಯಾಕ್ ಸಾರ್ ಬೇಜಾರ್ ಮಾಡ್ಬೇಕು. ಅಲ್ ನಿಲ್ಬೇಡಿ ಇಲ್ ನಿಲ್ಬೇಡಿ, ಚಿಲ್ಲರೆ ಕೊಡ್ರಿ, ಒಳಗ್ ಹೋಗ್ರಿ ಜಾಗ ಇದೆ ಅಂದ್ರೆ ಬೇಜಾರಾಗಿ ಸುಮ್ನೆ ಆಗೊರು ಇದ್ದಾರೆ, ಹಾಗೆ ಮೈ ಮೇಲೆ ಬರೋರು ಇದಾರೆ. ಈ ಎಲ್ಲಾ ಲಕ್ಷಣಗಳೂ ಬೇಜಾರು ಮತ್ತೆ ಸುಸ್ತಿಂದಲೆ ಅಲ್ವಸಾರ್ ??? ಅದುನ್ನೆಲ್ಲ ಮನ್ಸಿಗೆ ಹಚ್ಕೊಳಕ್ಕಗತ್ತಾ ಸಾರ್ ?
" ಇದೆಲ್ಲ ಆಗ್ಬಾರ್ದು ಅಂತಲೇ ಸಾರ್ ನಾನು ಒಳ್ಗಡೆ ಇಂದ ಚೀಟಿ ಕೊಡಕ್ಕೆ ಶುರು ಮಾಡ್ತಿನಿ. ಹಾಗೆ ಹೆಗಿದ್ದೀರ? ಕೆಲ್ಸ ಆಯಿತ ಸ್ವಾಮಿ ಅಂತಲೆ ಮಾತಾಡುಸ್ತ ಚೀಟಿ ಹರಿತ ಜಾಗಮಾಡಿ ನಿಲ್ಲುಸ್ತಾಬರ್ತೀನಿ. ಜನ ಹಾಗೆ ಒಳ್ಗಡೇಕ್ ಸರಿತಾಬರ್ತಾರೆ. ನಮ್ ಜನ ಹೇಗೆ ಅಂದ್ರೆ, ಸುಮ್ನೆ ಏನ್ ಸಾರ್ ಹೆಗಿದ್ರಿ ಅಂದ್ರೆ ಸಾಕು ಸಹಾನುಭೂತಿ ತೋರುಸ್ತಾರೆ, ಹೇಳಿದ್ದಿಕ್ಕೆ ಸರಿಯಾಗಿ ಕೈ ಜೋಡುಸ್ತಾರೆ. ಅದಕ್ಕೆ ಸಾರ್ ನಾನ್ ಎಲ್ಲಾರ್ನು ಹೀಗ್ ಮತಾಡ್ಸಿ ನನ್ ಕೆಲ್ಸಕ್ಕೆ ಸುಲಭ ಮಡ್ಕೊಳ್ತಿನಿ.

-- "ಇದುನ್ನ ೧೨ನೇ ಸರದಿಯ ಪ್ರಯಾಣದಲ್ಲೂ ಮಾಡ್ತಿದೀರಲ್ಲ,
ಇದು ಕಷ್ಟ ಆಗೊಲ್ವ? ಇಷ್ಟೊಂದು ತಾಳ್ಮೆ ಇರತ್ತಾ ನಿಮಿಗೆ ? " ಅನ್ನೊ ಪ್ರಷ್ನೆಗೆ ಆ ಮನುಷ್ಯನ ಉತ್ತರ ಹೀಗಿದೆ...

 ಕಷ್ಟ ಅನ್ನೋಮಾತ್ ಹೆಗ್ಸಾರ್ ಬರತ್ತೇ ? ನಾನು ಇದೇ ವ್ರುತ್ತಿಯಲ್ಲಿರೋದು. ನಾನು ಹೀಗೆ ಅಭ್ಯಾಸ ಮಡ್ಕೊಂಡ್ ಬಂದೆ ಮೊದ್ಲಿಂದಲೂ. ಅದಿಕ್ಕೆ ಹೀಗಿರೊದಿಕ್ಕೆ ಕಷ್ಟ ಅನ್ನೊದು ನನಿಗ್ ನಗು ಬರ್ಸೊ ವಿಚಾರ ಸಾರ್.....

--ಸರಿ ನೀವು ಜನನ್ನ ಅರ್ಥ ಮಾಡ್ಕೊಳಕ್ಕಾದ್ರು ಕಷ್ಟಪಟ್ಟಿರ್ತೀರ ಅಲ್ವ ?

ಸಾರ್, ಜನನ್ನ ಅರ್ಥ ಮಡ್ಕೊಳೊದು ಸುಲಭ, ಚಿಲ್ಲರೆ ವಿಚಾರ ಬಂದ್ರೆ ಸಾಕು ಅರ್ಥ ಮಾಡ್ಕೊಂಡ್ ಬಿಡ್ತೀನಿ. ಜನ್ರು ಚಿಲ್ಲರೆ ಬುದ್ಧಿ ಇಂದಲೇ ಗುರ್ತು ಮಾಡ್ಕೊಳ್ತಾರೆ ಸಾರ್, ಅದು ತುಂಬ ಕಷ್ಟವಾದ ವಿಚಾರ ನಿಮಿಗೆಲ್ಲಾ ಅರ್ಥ ಮಾಡ್ಸದಿಕ್ಕೆ ಬಿಡಿ .....ಎಲ್ಲಾ ಜನರಲ್ಲೂ ಚಿಲ್ಲರೆ ತೊಂದರೆ ಇದ್ದೇ ಇರತ್ತೆ ಸಾರ್ ಅದಿಕ್ಕೇನ್ ಮಡ್ಲಿಕ್ಕಾಗಲ್ಲ. ಒಂದ್ ಒಂದ್ಸಲಿ ಸುಮ್ ಸುಮ್ನೆ ಕ್ಯಾತೆ ಶುರು ಮಾಡಿ ಪ್ರಯಾಣಿಕ್ರು ಗಮನ ಸೆಳೆದು ಕಳ್ತನ ಮಾಡೊ ಕಳ್ಳ್ನನ್ ಮಕ್ಕ್ಳು ಹತ್ತುತ್ತಾರೆ. ಅವ್ರುನ್ನ ಅರ್ಥ ಮಾಡ್ಕೊಂಡು ಕಳ್ತನ ತಡೊಯೊದು ಸ್ವಲ್ಪ ಕಷ್ಟನೇ ಸಾರ್...........


--ಸರಿ ಸಾರ್, ನಮಿಗ್ ಅರ್ಥ ಮಡ್ಕೊಳೊದ್ಯಾಕೆ ಕಷ್ಟ ಆಗತ್ತೆ? ಅಂತಹ ಕ್ಲಿಷ್ಟವಾದುದ್ದೇನಿದೆ ಇದ್ರಲ್ಲಿ?
ಹೇಳುದ್ನಲ ಸಾರ್ ಚಿಲ್ಲರೆ ವಿಚಾರ ಅಂತ ಬಿಡಿ............

--ಚಿಲ್ಲರೆ ವಿಚಾರ ಸರಿ ಸಾರ್, ಆದ್ರೆ ಸ್ವಲ್ಪ ಅರ್ಥ ಮಾಡ್ಸಿ ನಮಿಗೂ.....
ಅಯ್ಯೊ ಸಾರ್ ಬಿಡಿ...ನಿಮ್ಮ ಸ್ಟಾಪ್ ಬಂತು ಇಳೀರಿ...................

ಒಬ್ಬ ಚೀಟಿವಾಹಕನನ್ನು ನಾವು ಸಮಾಜದಲ್ಲಿ ಪರಿಕಲ್ಪಿಸುವುದು ಸಾಮಾನ್ಯ ವೆಂಬ ಕೀಳು ಭಾವನೆ ಹುಟ್ಟಿಸುವಂತಹ ಪದದಿಂದ, ಅವರ ಸಾಮಾನ್ಯ ವಾದ ನಡೆನುಡಿಗಳು ನಮಗೆ ಅಸಮಾನ್ಯ.  ಸಂಯಮ, ಸಮಾಧಾನ ಹಾಗು ಸರಳತೆಯನ್ನು ತನ್ನ ವ್ರುತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಹತ್ತರವಾದ ಸಂಗತಿ. ನಮ್ಮ ಮನಸ್ಸು ಸ್ವಲ್ಪ ಅವ್ಯವಸ್ಥಿತವಾದರು ನಮ್ಮ ನಡೆನುಡಿಗಳ ಹಿಡಿತ ಯಾರ ಕೈಯಲ್ಲಿರುವುದೋ , ನಾವು ಏನುಮಾಡುತ್ತೀವೊ ಅದು ಸಹ ತಿಳಿಯದ ಸಂಗತಿ.ಇಂತಹ ಮನಸ್ಥಿತಿಯಲ್ಲಿ ನಾವೇನೇ ಮಾಡಿದರು ಅದು ಹಾಳೆ.........
ಈ ರೀತಿ ಅಭ್ಯಾಸ ಬಲದಿಂದ ಇಂತಹ ಅತ್ಯಾವಶ್ಯಕವಾದ ಸಮಾಧಾನ ತಂದುಕೊಂಡು ಸಮಾಜವನ್ನು ತನ್ನ ಮಾರ್ಗದಲ್ಲಿ ನಿಖರವಾಗಿ ವಿಶ್ಲೇಷಿಸಿ, ಎಲ್ಲರಿಗೂ ತನ್ನ ಸಹಾನುಭೂತಿಯನ್ನು ಕರುಣಿಸಿ, ತನ್ನ ವ್ರುತ್ತಿಯನ್ನು ಪಾರಂಗತವಾಗಿ ನಡೆಸಿಕೊಂಡು ೮೦ ಎ ಬಸ್ಸಿನಲ್ಲಿ ಚಿಟಿನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಅಸಮಾನ್ಯ ಸ್ವಚ್ಛ ಮನಸ್ಸಿನ ಮನುಷ್ಯನಿಗೆ ವಂದನೆ.......
|
|
|
ಬಸ್ಸಿಳಿದು ಅದೇಯೊಚನೆಯಲ್ಲಿ ಮುಂದಿನದಿನಗಳಲ್ಲಿ ಅದೇ ಬಸ್ಸಿಗಾಗಿ ಕಾದು ಹಲವಾರು ಬಾರಿ ಪ್ರಯಾಣಿಸಿದಮೇಲೆ ತಿಳಿಯಿತು ಚಿಲ್ಲರೆ ಹಾಗು ಮನುಷ್ಯನ ಮಧ್ಯೆಯಿರುವ ಬೆಸುಗೆಯ ಬಾಂಧವ್ಯ....!!!
                                               
                                                                                                                                                                                                                                                                                                                                                           
                                                                                                                       
..... ಸಂಕೇತ್ ಕಶ್ಯಪ್.....

1 comment:

  1. ಚೆನ್ನಾಗಿದೆ ಸಂಕೇತ್ :-) ಕಂಡಕ್ಟರ ಬಗ್ಗೆ ಚೆನ್ನಾಗಿ ಬರೆದಿದ್ದೀರ :-)

    ReplyDelete